ಯಾದವ
	ಭೇದಾಭೇದವಾದಿ. ರಾಮಾನುಜರ ಗುರುಗಳಾಗಿದ್ದ ಯಾದವ ಪ್ರಕಾಶರೂ ಇವರೇ ಎಂದು ಹೇಳಲು ಸಾಧ್ಯವಿಲ್ಲ. ರಾಮಾನುಜರ ವೇದಾರ್ಥ ಸಂಗ್ರಹದಲ್ಲಿ, ವೇದಾಂತ ದೇಶಿಕರ ಪರಮತ ಭಂಗದಲ್ಲಿ, ವ್ಯಾಸತೀರ್ಥರ ತಾತ್ಪರ್ಯ ಚಂದ್ರಿಕೆಯಲ್ಲಿ ಇವರ ಭೇದಾಭೇದವಾದದ ಉಲ್ಲೇಖವಿದೆ. ಇವರು ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಭೇದಾಭೇದ ಸಮ್ಮತವಾದ ಭಾಷ್ಯವನ್ನು ಬರೆದರೆಂಬ ಪ್ರತೀತಿಯೂ ಇದೆ. ಇವರು ನಿರ್ಗಮ ಬ್ರಹ್ಮವಾದವನ್ನೂ ಮಾಯಾವಾದವನ್ನೂ ಒಪ್ಪಲಿಲ್ಲ. ಇವರ ಅಭಿಪ್ರಾಯದಲ್ಲಿ ಜ್ಞಾನಕರ್ಮ ಸಮುಚ್ಚಯ ಮೋಕ್ಷಕ್ಕೆ ಸಾಧನ. ಬ್ರಹ್ಮ ಭಿನ್ನಾಭಿನ್ನವಾಗಿದೆ. ಇವರು ಭಾಸ್ಕರರಂತೆ ಉಪಾಧಿವಾದಿಗಳಲ್ಲ ; ಪರಿಶ್ರಮವಾದಿಗಳು. ಜೀವನ್ಮುಕ್ತಿಯನ್ನು ಅಂಗೀಕರಿಸುವುದಿಲ್ಲ. ಮುಂದೆ ನಿಂಬಾರ್ಕರು ತಮ್ಮ ಭೇದಾಭೇದವಾದವನ್ನು ಪುನಃ ಪ್ರತಿಪ್ಠಾಪನೆ ಮಾಡಿದರು. ನಿಂಬಾರ್ಕರು ತಮ್ಮ ಕೃಷ್ಣೋಪಾಸನೆಯ ಭಕ್ತಿಭಾವದಲ್ಲಿ ಭೇದಾಭೇದ ಸಿದ್ಧಾಂತವನ್ನೂ ಬೆರೆಸಿದರು.                
  (ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ